ಊಹೆ
	ಆಧಾರಭಾವನೆ ಎಂಬ ವಿe್ಞÁನ ಪರಿಭಾಷೆಗೆ ಭಾರತೀಯ ತತ್ತ್ವಶಾಸ್ತ್ರದಲ್ಲಿ ಬಳಕೆಯಲ್ಲಿರುವ ಪದ (ಹೈಪಾತಿಸಿಸ್). ಪುರಾಣ, ಮತ, ಕಲೆಗಳು ಈ ಮಾರ್ಗವನ್ನು ಅನುಸರಿಸುತ್ತವೆ. ವಿe್ಞÁನಿಗಳು ಅನುಸರಿಸುವ ಅರ್ಥಕಲ್ಪನೆಯ ಮಾರ್ಗ ಇದರಿಂದ ಭಿನ್ನವಾದದ್ದು. ಕಲೆಯ ಕಲ್ಪನೆ ಪ್ರತಿಭೆಗೆ ಅಧೀನ. ರಾಹುಕೇತುಗಳ ಕಥೆಯಿಂದ ಗ್ರಹಣ ಕಾರಣವನ್ನು ಅರ್ಥೈಸಿರುವುದು ಇದಕ್ಕೊಂದು ದೃಷ್ಟಾಂತ. ವಿe್ಞÁನಿಯ ಅರ್ಥಕಲ್ಪನೆ ಬೌದ್ಧಿಕವಾದದ್ದು, ತರ್ಕನಿಯಮಗಳಿಗೆ ಅಧೀನವಾದದ್ದು. ಕಾರ್ಯಕಾರಣಗಳಿರುವ ನಿಯತ ಸಂಬಂಧವನ್ನು ವ್ಯಕ್ತಪಡಿಸುವುದೇ ಅದರ ಗುರಿ. ವಿe್ಞÁನ ಕೊಡುವ ಅರ್ಥ ವಿವರಣೆ ಒಂದೇ ಆಗಿರಬೇಕು ಮತ್ತು ಅದು ರುಜುವಾತಾಗಿರಬೇಕು; ವಾಸ್ತವ ವಿಷಯಗಳಿಗೆ ತಾಳೆ ಬೀಳಬೇಕು. ಗ್ರಹಣದ ವಿಚಾರವಾಗಿಯೂ ಅವರು ಕೊಡುವ ಅರ್ಥವಿವರಣೆ ಒಂದೇ ಆಗಿರಬೇಕು, ಆಗಿದೆ. ಸೂರ್ಯನಿಗೂ ಭೂಮಿಗೂ ನಡುವೆ ಚಂದ್ರ ಬಂದಾಗ, ಸೂರ್ಯನಿಗೂ ಚಂದ್ರನಿಗೂ ನಡುವೆ ಭೂಮಿ ಬಂದಾಗ ಗ್ರಹಣಗಳಾಗುತ್ತವೆ ಎಂಬುದು ವಿe್ಞÁನದ ತಿಳಿವಳಿಕೆ. ಆದರೆ ಗ್ರಹಣಕ್ಕೆ ಕಾರಣವನ್ನು ಹೇಳುವಲ್ಲಿ ಒಂದೊಂದು ಜನಾಂಗದವರು, ಒಂದೊಂದು ಮತದವರು ತಮ್ಮದೇ ಆದ ಕಟ್ಟು ಕಥೆಗಳನ್ನು (ಮಿತ್ಸ್) ಹೇಳುತ್ತಾರೆ. 
	
(ನೋಡಿ- ಆಧಾರಭಾವನೆ)								
	
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ